ಮಳೆ ಆಗಮನ
ಸಾಕಷ್ಟು ದಿನದ ಮೇಲೆ ಬಂದ ಮಳೆ
ಎಲ್ಲರ ಮುಖದಲ್ಲೂ ತಂದಿತು ಹೊಸ ಕಳೆ
ಗಿಡ-ಮರಗಳಿಗೆ ಮಳೆ ಹನಿಯ ಚುಂಬನ
ಜೀವ-ಜಂತುಗಳ ಮನದಲ್ಲೇನೋ ಹೊಸ ಕಂಪನ
ಗರಿಬಿಚ್ಚಿ ನರ್ತಿಸಿದವು ನವಿಲುಗಳು
ಎಲ್ಲರಲ್ಲೂ ಉದಯಿಸಿದವು ಹೊಸ ಕನಸುಗಳು
ಸಸ್ಯ ಪ್ರಾಣಿ ಕುಲಕ್ಕೆ ಈಗ ಬಂದಿತು ಜೀವ
ಸುಖದಿ ಮರೆತವು ಎಲ್ಲ ನೋವ
ಮಳೆ ಹನಿ ಬಿದ್ದ ಮಣ್ಣಿನ ವಾಸನೆ
ಆಹಾ !ಎಂತಾ ಚಂದ ಅದರ ಸುವಾಸನೆ
ಇದೀಗ ಆರಂಭ ಭೂಮಿಯ ಮೇಲೆ ಚಿಗುರು
ರೈತರ ಜೀವನ ಸುಖದಿ ಶುರು
ಅಪರೂಪದ ಮಳೆಯ ಆಗಮನ
ಜೀವ-ಜಂತುಗಳ ಮನದಲ್ಲಿ ಹೊಸ ಚೇತನ
ಎಲ್ಲರಲ್ಲೂ ಸುಖ-ಸಂತಸದ ಉದಯ
ಮಳೆ ಬಂದ ಈ ಸಮಯ
- madhu
04 Jun 2021, 01:42 pm
Download App from Playstore: