ನನ್ನವಳು

ಪ್ರೀತಿ ಕೊಟ್ಟ ಗೆಳತಿ
ವಿಷವಾ ಕೊಟ್ಟರು
ಕುಡಿದು ಮಲಗಬಹುದು
ಕಣ್ಣ್ ಮುಚ್ಚಿ
ಆರಡಿ ಮೂರಡಿ
ಗುಂಡಿಯೋಳಗೆ ಕನಸು ಕಾಣುತ್ತಾ
ಪ್ರೀತಿ ತುಂಬಿದ ಎದೆಗೆ
ಚೂರಿ ಚುಚ್ಚಿದರು
ತೆಡೆದುಕೊಳ್ಳಬಹುದು
ಎದೆಯ ಮೇಲಿನ
ಗಾಯದ ನೋವು ಆದರೆ
ಪ್ರೀತಿ ಪ್ರೇಮದ ರೆಕ್ಕೆ ಕಟ್ಟಿ
ಆಗಸದಲ್ಲಿ ಹಾರಾಡಿ
ಕುಣಿದು ಕುಪ್ಪಳಿಸಿದ
ಮನಸು ಹೃದಯದ
ನೋವು ತಡೆದುಕೊಳ್ಳುವುದು
ಬಹಳ ಕಷ್ಟ

- ರಾಜು ಹಾಸನ

22 Jun 2021, 09:56 pm
Download App from Playstore: