ಸಿರಿ ರಕ್ಷೆ
ಹಕ್ಕಿಗಳ ಕೂಟದಲ್ಲಿ ನಾ ಮೈಮರೆತು ಕುಳಿತಿರಲು ಹಸಿರೆಲೆಯ ಮೇಲಿಂದ ಇಬ್ಬನಿಯ ಹನಿಯೊಂದು ನನ್ನ ಕೈಮೇಲೆ ಇಳಿದಿರಲು ನನ್ನ ಮನದ ಪರದೆ ಸರಿಸಿ ಹೃದಯ ಹುಡುಕಿತು ನಿಮ್ಮ ತೇಜಸ್ವಿ ಅಂತ ಮನವ ಸಿಗಲಿಲ್ಲ ಅಂದು ನೀವು ನನಗೆ ತಿಳಿಯಲಿಲ್ಲ ನಾ ಯಾರೆಂದು ನಿಮಗೆ ಶ್ರೀ ರಕ್ಷೆ ದಿನದಂದು ಪ್ರಣತಿಯ ಹಿಡಿದು ನಾ ಕಾಯಿ ದಿರಲು ಹೂವಂತ ಮನದ ವನು ಸಜ್ಜನಿಕೆ ಗುಣದವನು ಅಣ್ಣ ಎದುರಲ್ಲಿ ನಿಂತಿರಲು ಆರತಿಯ ಬೆಳಗಿದೆ ನೋ ಸಿಹಿ ತುತ್ತ ನೀಡಿದೆನು ಅಣ್ಣ ನನ್ನ ಶ್ವಾಸ ದಲ್ಲಿ ಉಸಿರಾಗಿ ನೆಲೆಸೆಂದು ಬೇಡಿದೆನು ಮನಸಿನ ಪ್ರವಾಹದ ಅಲೆಗಳ ದಾಟಿ ಶುದ್ಧ ಪ್ರೇಮದ ಹೃದಯ ತಂತಿಯ ಮೀಟಿ ರವಿಯ ಕಿರಣದ ಕಾಂತಿ ಅಣ್ಣನಲ್ಲಿ ಇರಲು ತಂಗಿಯ ಹೃದಯದ ನೆನಪು ಅದರೊಳಗೆ ಬೆಳಗುತಿರ ಲೂ ಅಮ್ಮ ಹಾರೈಸಿದರು ನಮಗೆ ವಾತ್ಸಲ್ಯಕ್ಕೆ ಸಸಿಯಾಗಿ ಪ್ರಶಂಸೆಗೆ ಹೆಸರಾಗಿ ಯುಗವು ಸ್ಮರಿಸಲಿ ನಿಮ್ಮ ತವರಿನ ಸ್ಪೂರ್ತಿಯಾಗಿ.
Download Kannada Kavana app : https://goo.gl/9ZnKGJ
- nagamani Kanaka
24 Jun 2021, 08:16 pm
Download App from Playstore: