ಅಂಬರದ ಚುಂಬನ

ಹೇ ಅಂಬರದ ಚುಂಬನದ ಬೆಳಕ ಚೆಲುವೆ,
ನೀನೇಕೆ ಯಾರಿಗೂ ಕಾಣದಾಗಿರುವೆ.?
ಎಲ್ಲಿದ್ದರೂ, ಹೇಗಿದ್ದರೂ, ನಿನ್ನೇ ನಾ ಪ್ರೀತಿಸುವೆ,
ಓ ಕನಸಿನ ಕಲ್ಪನೆಯ ಚೆಲುವೆ......


ಇದು ಕೊನೆಯಿರದ ಸೌಂದರ್ಯ ಸಂಭಾಷಣೆ,
ನಿನ್ನ ಪ್ರತಿರೂಪ, ಗುಣದೀಪ ನನಗಾಸರೆ,
ನೂರು ಪದ ಸೇರಲು,
ಒಬ್ಬ ಕವಿಯಾಗಲು.....

ನಿನ್ನ ಸ್ಪರ್ಷವಿದೆ, ಹರ್ಷವಿದೆ ಕಣಕಣದಲೂ,
ನನ್ನೊಲವು ಮನೆಮಾಡಲಿ ನಿನ್ನೆದೆಯಲೂ,
ಎರಡೂ ಶ್ರುತಿ ಸೇರಲಿ,
ಪ್ರೀತಿ ನವಿರಾಗಲಿ......

- abhi

01 Jul 2021, 04:46 pm
Download App from Playstore: