ಹೇಮರೆಡ್ಡಿ ಯಲ್ಲಮ್ಮ

ಯಲ್ಲಮ್ಮನ ಕರುಣೆಯಿಂದ
ಎಲ್ಲಾರು ಧನ್ಯರಮ್ಮ
ಹಲವಾರು ನಾಮದಿಂದ
ಅವತರಿಸಿದ ರೇಣುಕಾ ಯಲ್ಲಮ್ಮ

ಹುಟ್ಟಿದಳಮ್ಮ ಯಲ್ಲಮ್ಮ
ಕರುಣಾಡು ಮಣ್ಣಲ್ಲಿ
ಅವಳ ಮದುವೆ ಮಾಡಿ ಕೊಟ್ಟಾರವ್ವ
ಜಮದಾಗ್ನಿಗೆ ಯಲ್ಲವ್ವನ

ಸತ್ಯುಳ್ಳ ಶರಣೆ ಯಲ್ಲಮ್ಮ.....
ನಿತ್ಯ ಅವಳ ನೆನೆಯಬೇಕು ನಾವಮ್ಮ
ಜಮದಗ್ನಿ ಪರಿಕ್ಷಯಲ್ಲಿ
ಯಲ್ಲವ್ವನೆ ಪತಿವ್ರತೆಯವ್ವ

ಮರಳಲ್ಲಿ ಮಡಕೆಯ ಮಾಡಿ
ಹಾವಿನೆಡೆಯ ಸಿಂಬೆ ಮಾಡಿ
ಶಿವಪೂಜೆಗೆ ಗಂಗೆ ತಂದಾಳೊ....
ಯಲ್ಲವ್ವ ನಾಗಿ ಹುಚ್ಚೆಂಗಿ ಮಲ್ಲಮ್ಮನಾಗಿ

ಸವದತ್ತಿಲ್ಲಿ ಐಕ್ಯವಾಗಿ ತಲೆಮೇಲೆ ಕಡ್ಲಿಗೆ ಹೊತ್ತು
ಚೌಡ್ಕಿ ಎಂಬ ನಾದ ಸ್ವರದಲ್ಲಿ ಯಲ್ಲವ್ವನ ಹೊತ್ತು
ಭಕ್ತ ಜನರು ಉಘೇ ಉಘೇ ಎನ್ನುತ್ತಾರವ್ವ
ಯಲ್ಲವ್ವನ ಪವಾಡ ಗಂಡು ಜೋಗ್ತಿ ಯಲ್ಲವ್ವ

ಬೇವು ಭಂಡಾರದಲ್ಲಿ ಯಲ್ಲವ್ವನ ಮಹಿಮೆ ಇದೆ
ಹುಚ್ಚೆಂಗಿ ಬೆಟ್ಟದಲ್ಲಿ ಯಲ್ಲವ್ವನ ಅವತಾರಾವಿದೆ
ಕುಣಿಯುತ್ತ ಭಕ್ತಾ ಜನರ ಮನಸನ್ನು ಗೆದ್ದಳು ತಾಯಿ
ಪರಶುರಾಮನ ಜನ್ಮದಾತೆ ಏಳು ಕೊಳ್ಳದ.......
ಯಲ್ಲಮ್ಮ ತಾಯಿ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- gtr

04 Jul 2021, 06:39 pm
Download App from Playstore: