ಬದುಕಿನ ಪಯಣದಿ ನೀನೇ ನನಗೆಲ್ಲ....
ಬದುಕಿನ ಪಯಣದಿ ನಿನ್ನ ಕೈ ಹಿಡಿದು ಬಾಳಬೇಕು,
ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು...
ಯಾವಾಗಲೂ ನಂಬಿಕೆ ಇರಬೇಕು,
ಅನುಮಾನವೆಂಬ ರಾಕ್ಷಸ ನಮ್ಮ ನಡುವೆ ಬಾರದಂತೆ...
ಕೊನೆಯವರೆಗೂ ಪ್ರೀತಿಸುತ್ತ ಇರಬೇಕು,
ನೊಡುವವರಿಗೆ ಹೊಟ್ಟೆಕಿಚ್ಚು ಬರುವಂತೆ....
ಇಬ್ಬರ ನಡುವೆ ಸಣ್ಣ ಪುಟ್ಟ ಜಗಳ ಇರಬೇಕು,
ಕೊನೆಯಲ್ಲಿ ಇಬ್ಬರು ಸೋತು ಕ್ಷಮೆಕೇಳುವಂತೆ....
ಅನ್ಯೊನ್ಯವಾಗಿ ಇರಬೇಕು, ಮೂರನೆಯ ವ್ಯಕ್ತಿಯ
ಎದರು ಒಬ್ಬರನ್ನು ಇನ್ನೊಬ್ಬರು ಬಿಟ್ಟು ಕೊಡದಂತೆ...
msbhovi....✍️
- mani_s_bhovi
08 Jul 2021, 12:34 pm
Download App from Playstore: