ಜೀವನ ಪಾಠ ಹಾಗೆ ನನ್ನ ಮನದ ಮಾತು

ಹುಡುಕುತ್ತಿರುವ ದಾರಿ ಯಾವುದೋ
ಸಾಗಿ ಬಂದ ಹಾದಿ ಯಾವುದೋ
ಆರಂಬಭದ ಅರಿವಿಲ್ಲ
ಅಂತ್ಯದ ಸುಳಿವಿಲ್ಲ
ಜೊತೆಯಲ್ಲಿ ಸಾಗುವರು ಯಾರೋ
ನಡುವೆ ನೂಕಿ ಹೋಗುವರು ಯಾರೋ
ಬರುವಾಗ ಯಾರಿರಲಿಲ್ಲ
ಹೋಗುವ ಬಗ್ಗೆ ತಿಳಿದಿಲ್ಲ
ಇಲ್ಲಿ ಬಂದಿರುವುದು ಯಾಕೋ
ಹಾಗೆಯೇ ನಿಂತಿರುವುದು ಯಾಕೋ
ಬೇಕೆಂದರೂ ಖುಷಿ ಇಲ್ಲ
ಸಾಕೆಂದರೆ ನೋವು ನಿಲ್ಲಲ್ಲ
ಮುಂದೆ ಬದುಕಿನ ಬಂಡಿ ಹೇಗೋ
ನಾಳೆ ಕೂಡ ಈ ದಿನದ ಹಾಗೋ
ನಂಬಿಕೆ ಬಿಟ್ಟರೆ ಇಲ್ಲೇನಿಲ್ಲ
ಅದ ನಂಬಿಯೇ ಸಾಗಿದೆ ಜಗವೆಲ್ಲಾ......
msbhovi....✍️



- mani_s_bhovi

13 Jul 2021, 07:38 pm
Download App from Playstore: