ಧ್ವನಿ
ಗಡಚಿಕ್ಕುವಂತೆ ಕಿವಿಗೆ ಅಪ್ಪಳಿಸುತಿದೆ ಸಮುದ್ರದ ಅಲೆಗಳ ಶಬ್ದ,
ಕತ್ತಲ ಕರಾಳ ನೋಟಕೆ ಆಗಿವೆ ಹಕ್ಕಿಗಳು ಮೂಕ ಸ್ತಬ್ಧ,
ತಂಗಾಳಿ ಬೀಸುತ್ತಿರಲು ಮನಸಿನಲ್ಲೆನೋ ತಳಮಳ,
ಯಾರನ್ನೋ ಕಳೆದುಕೊಂಡತಹ ಕಳವಳ,
ಸುತ್ತಲೂ ಆವರಿಸಿತು ನೀರವ ಮೌನ,
ಆಲೋಚನೆಗಳ ಸುಳಿಯಲ್ಲಿ ಮುಳುಗಿ ಹೋದೆ ನಾ,
ಉತ್ತರ ಸಿಗದ ಪ್ರಶ್ನೆಗಳಿಗೆ ದಿಕ್ಕು ತೋಚದಾದೆ,
ಜೀವನದ ಸವಾಲುಗಳ ಎದುರು ಸೋತು ಜೀವನಕೆ ಶರಣಾದೆ ....
- Naresh Poojari
15 Jul 2021, 11:41 am
Download App from Playstore: