ಮೌನಿ

ಕೇಳಿದ್ದೊಂದು ಕರುನಾಡು
ಕಾಣುತಿಹುದೊಂದು ಸುಡುಗಾಡು.....

ಇದೆಂಥ ವಿಪರ್ಯಾಸ,
ಹೇಳಲೂ ಕೂಡಾ ಪ್ರಯಾಸ,
ಮಣ್ಣಾಗಿಸಿದರು ಮತ ನೀಡುವಾಗ ಕಾಣಿಸಿದ್ದ ಕನಸ........

ಬದಲಾದ ಧ್ಯೇಯ
ಇವರಲ್ಲ ವಿಧೇಯ
ಅಪಹಾಸ್ಯದಲ್ಲಿದೆ ರಾಜಕೀಯ....

ನಾಲ್ಕು ಜನಕಾದರೂ ಉಪಕಾರಿ ಎಮ್ಮೆಗಳು
ಮತ ಹಾಕಿದ ಜನಕಾದರು ಮಾರಿ ಈ ಎಮ್ಮೆಲ್ಲೆಗಳು......

ಮಾತಲ್ಲೇ ಮುಗಿಯಿತು ದೇಶೋದ್ಧಾರ
ಇವರಿಗೆ ಸೀಟು ಸಿಗುವುದೇ ಹರ್ಷೋದ್ಘಾರ.......

ಹೊಲಸು ತಿನ್ನುವ ಎಮ್ಮೆ ಕೊಡುವವು ಹಾಲ
ಹೊಲಸು ಎಮ್ಮೆಲ್ಲೆಗಳಿಂದ ಕೋಲಾಹಲ......

ಕಳೆದು ಹೋಗಿದೆ ಪ್ರಜಾಪ್ರಭುತ್ವ
ಇದಕೆ ಕಾರಣ ಅಂದೇ ಹೇಳಿದ ಪ್ರಜೆಗಳ ನೋಟಿಗೆ ಓಟೆಂಬ ತತ್ವ............

-ಮೌನಿ

- Naresh Poojari

15 Jul 2021, 11:44 am
Download App from Playstore: