ಮನಸು ಮೌನವಾಗಿದೆ

ಕಣ್ಣುಗಳು ಕಂಬನಿಯ ಮೀಟುತಿದ್ದರು,
ಯಾರಿಗೂ ತಿಳಿಯದಂತೆ ನಟಿಸುತ್ತಿರುವೆ.

ಮನಸ್ಸಿನಲ್ಲಿ ಅದೆಷ್ಟೋ ಮಾತುಗಳ ಸಂಘರ್ಷ ನಡೆಯುತ್ತಿದ್ದರೂ,
ಎಲ್ಲರೆದುರು ಮೌನಿಯಂತೆ ನಟಿಸುತ್ತಿರುವೆ.

ನಾ ಕಂಡ ಕನಸುಗಳು,
ಕಣ್ಣಾ ಮುಂದೆಯೇ ಕಮರಿ ಹೋಗುತಿದ್ದರು,
ಕಾರಣ ತಿಳಿಯದೆ ಕೊರಗುತಿರುವೆ.

ಎಲ್ಲರೂ ಜೊತೆಯಿದ್ದರೂ,
ಮನಸಿನ ಭಾವನೆ ಹೇಳಲಾಗದೆ,
ಒಬ್ಬಂಟಿಗಳಂತೆ ಬದುಕುತ್ತಿರುವೇ.

ಕತ್ತಲೆಯ ಕಾರ್ಮೋಡ ಸರಿದು,
ಬೆಳಕು ಮೂಡುವುದೆಂಬ, ಭರವಸೆಯಲ್ಲಿ ನಾ ಬಾಳುತಿರುವೆ.

- Veena

18 Jul 2021, 08:35 pm
Download App from Playstore: