ಮನದ ಅಂಗಳದಲ್ಲಿ
ಮನದ ಅಂಗಳದಲ್ಲಿ
ಬೆಳದಿಂಗಳ ನಲ್ಲೆ...
ನಾ ಕಂಡೆನು ಅವಳ
ಅನುರಾಗದ ಲೀಲೆ...
ಹುಸಿಮುನಿಸಿನ ಒಡವೆ
ನೀ ತೊಟ್ಟರೆ ಚೆಲುವೆ...
ನಾ ರಮಿಸಲು ಬರುವೆ
ನೀ ಕೋಪವ ಬಿಡುವೆ...
ಅದರದ ನಡುವೆ
ನಗೆ ಮಲ್ಲಿಗೆ ಅರಳಿ...
ನಸು ನಾಚಲು ಕೆನ್ನೆ
ಕೆಂದಾವರೆ ಹೆಣ್ಣೆ...
ಹೃದಯದ ಬಡಿತ
ನಿನ್ನ ಕೂಗಿದೆ ಸತತ...
ಮನಸಿನ ತುಡಿತ
ಇದು ಬಯಕೆಯ ಮಿಡಿತ...
ಸಕ್ಕರೆ ಹಾಲು
ನಮ್ಮಯ ಒಲವು...
ನಗುತಿರೆ ನೀನು
ಈ ಬದುಕಲಿ ಗೆಲುವು...
- ಪಿ.ಜಿ.ಜ್ಯೋತಿ
20 Jul 2021, 04:33 pm
Download App from Playstore: