ನನಗೆನಲ್ಲ

ವರದಕ್ಷಣೆ ಎನ್ನದಿರಿ ವರನಿಗೆ ವರೋಪಚಾರ ಎಂದು ಕೊಡಿ ಅಷ್ಟೇ ‌

ಪೊಲೀಸರಿಗೆ ತಿಳಿಸಿದರೆ
ನಿಮ್ಮ ಮಗಳು ನಿಮ್ಮ ಮನೆಗೆ ಅಷ್ಟೇ

ನೋಡಿ ಹೆಣ್ಣು ಕೊಡಿ
ನಾನೇನು ಕಡಿಮೆ ಇಲ್ಲ
ನಿಮಗಿಂತ ಎರಡರಷ್ಟು
ನೀವು ಕೊಟ್ಟಿದ್ದು ನನಗಲ್ಲ ನಿಮ್ಮ ಮಗಳಿಗೆ ಅಷ್ಟೇ

ನಾನೇನು ಬಹಳ ಕೇಳುವುದಿಲ್ಲ ಬರೀ ಹತ್ತು ಸಾವಿರ ಹತ್ತು ತೊಲೆ ಅಷ್ಟೇ

ನಿಮ್ಮ ಮಗಳು. ಸುಖವಾಗಿರಬೇಕೆಂದರೆ.
ಕಾರು ಬಂಗಲೆ ಕೊಡಿ.
ಮತ್ತೇನು ಬೇಡ ಅಷ್ಟೇ

ಕೊನೆಯದಾಗಿ ನೀವು ಸತ್ತರೆ ನಿಮ್ಮ ಆಸ್ತಿ ಅದೂ ನನ್ನಗಲ್ಲ ನಿಮ್ಮ ಮಗಳಿಗೆ ಕೊಡಿ ಅಷ್ಟೇ

ಮತ್ತೆನೂ ಇಲ್ಲ ನಾನು ಹೇಳುವುದು ಇಷ್ಟೇ

- shankar gargi

21 Jul 2021, 08:39 pm
Download App from Playstore: