ನೆನಪುಗಳು ಮಾತ್ರ
ನೆನಪುಗಳ ಸಾಲಿನಲ್ಲಿ
ನೀ ಬರೀ ನೆನಪು ಮಾತ್ರ
ನಿನ್ನ ಆ ಬೆಳದಿಂಗಳ ನಗು
ನಿನ್ನ ಆ ಕುಡಿಯಂಚಿನ ನೋಟ
ಬರಿ ನೆನಪು ಮಾತ್ರ
ನಡೆವಾಗ ಆ ನಿನ್ನ ಗೆಜ್ಜೆಯ ನಾದ
ನೀ ಮುಡಿದ ಮಲ್ಲಿಗೆಯ ಪರಿಮಳ
ಬರಿ ನೆನಪು ಮಾತ್ರ
ನೀ ನಾಡಿದ ನುಡಿಮುತ್ತುಗಳು ಸಾಲು
ನೀ ಬಳಸಿದ ಆ ತೋಳು ಬಂಧನ
ಬರಿ ನೆನಪು ಮಾತ್ರ
ಈ ಬದುಕಿನ ಪುಟದಲ್ಲಿ ಬಾಳು ಕಲಿಸಿದ
ದೇವತೆ ನೀನು
ಈ ಹೃದಯ ಬಡಿತದ
ಮೊದಲ ಮಿಡಿತ ನೀನು
ನನ್ನ ಕೊನೆಯುಸಿರಿನ
ಸವಿನೆನಪು ನೀನು
- shankar gargi
23 Jul 2021, 12:27 pm
Download App from Playstore: