ಮನಸ್ಸು

ಹುಚ್ಚು ಮನಸ್ಸು
ಹರಿದಾಡುತ್ತಿದೆ
ನೂರೆಂಟು ಕಡೆ
ದಾರಿ ಕಾಣದೆ
ಸಾಗುತ್ತಿದೆ ಬದುಕಿನಡೆ
ಬಯಸಿದ್ದೆಲ್ಲ
ಬೇಕು ಅಂತ
ಹುಡುಕಾಡುತ್ತಿದೆ
ಹುಚ್ಚು ಮನಸ್ಸಿನ
ಕಿಚ್ಚಿನಲ್ಲಿ ತೇಲಾಡುತ್ತಿದೆ
ಹುಚ್ಚು ಆಸೆಗೆ
ಕೊಚ್ಚಿ ಹೋಗುವ
ಈ ಮನಸ್ಸಿಗೆ ನೆಮ್ಮದಿ
ಎಂತೋ ಕಾಣದಾಗಿದೆ
ಕರಿನೆರಳಿನ ಅಡಿಯಲ್ಲಿ
ಬೆಳಕು ಕಾಣದೆ
ಮಣ್ಣಾಗಿ ಹೋಗಿದೆ

- shankar gargi

23 Jul 2021, 01:33 pm
Download App from Playstore: