ನಿನ್ನ ನೆನಪಲ್ಲೇ
ನಾನು ಬರೆಯುವ
ಪ್ರತಿಯೊಂದು ಅಕ್ಷರ
ನಿನ್ನ ನೆನಪಲ್ಲೇ ಗೆಳತಿ
ನಾನು ನೋಡುವ
ನೋಟವೆಲ್ಲ
ನಿನ್ನ ನೆನಪಲ್ಲೇ ಗೆಳತಿ
ನಾನು ಹಾಡುವ
ಪ್ರತಿಯೊಂದು ನುಡಿಯು
ನಿನ್ನ ನೆನಪಲ್ಲೇ ಗೆಳತಿ
ನಾನು ಇಡುವ
ಪ್ರತಿಯೊಂದು ಹೆಜ್ಜೆಯೂ
ನಿನ್ನ ನೆನಪಲ್ಲೇ ಗೆಳತಿ
ಈ ಹೃದಯಬಡಿತದ
ಪ್ರತಿಯೊಂದು ಮಿಡಿತ
ನಿನ್ನ ನೆನಪಲ್ಲೇ ಗೆಳತಿ
ನನ್ನ ಉಸಿರಿನ
ಕೊನೆಯ ಉಸಿರು
ನಿನ್ನ ನೆನಪಲ್ಲೇ ಗೆಳತಿ
- shankar gargi
23 Jul 2021, 01:49 pm
Download App from Playstore: