ಮನ ಮಂದಿರ
ನಮ್ಮ ಮನ ಮಂದಿರದ
ಗುರುವೇ
ನೀ ಎದ್ದು ಬಾರೊ
ಪ್ರಭುವೇ
ಸತ್ಯಮಾರ್ಗದಲ್ಲಿ
ನಿತ್ಯ ನಡೆಯುವ
ಶಕ್ತಿ ತುಂಬುವ ದೈವವೇ
ಜಾತಿ ಮತ
ಭೇದವಿಲ್ಲದೆ ವಿದ್ಯೆ
ಎಮಗೆ ನೀಡಿದೆ
ಅಜ್ಞಾನದ ಕತ್ತಲೆಯಿಂದ
ಸುಜ್ಞಾನದ ಬೆಳಕಿನೆಡೆಗೆ
ಎಮ್ಮನು ಕಳುಹಿದೆ
ಶುದ್ಧ ಮನಸ್ಸಿನ ಅಂತರಾಳದಿ
ಬೀಜಾಕ್ಷರವ ಬಿತ್ತಿದೆ
ಅಕ್ಷರದ ದಾಸೋಹದಿ
ಉಣಿಸಿ ಎಮ್ಮನು ಬೆಳೆಸಿದೆ
ನಿಮ್ಮ ನುಡಿಯ
ವಾಣಿಯಲ್ಲಿ ಬದುಕಿನ
ಮಾರ್ಗವ ಕಲಿಸಿದೆ
ಗುರುಪೂರ್ಣಿಮೆಯ
ಪೂರ್ಣಚಂದ್ರರು ನೀವು
ಬೆಳಕಿನಡೆಗೆ ನಡೆಸುವ
ಜ್ಞಾನದೇವರು ನೀವು
- shankar gargi
26 Jul 2021, 09:25 am
Download App from Playstore: