ಹೃದಯ ತೀರದಿ
ಹೃದಯ ತೀರದಿ ಹರೆಯ ನವಿಲು
ಗರಿಯ ಬಿಚ್ಚಿ ಕುಣಿಯುತಿರಲು!!
ಒಲವ ಸುರಿದ ನೀಲಿ ಮುಗಿಲು
ಸೇರಿತು ತನು ಮನದ ಕಡಲು!!
ಒಂಟಿ ಜೀವದ ಜಂಟಿ ಬಾವಕೆ
ಆಗಿ ಬಂದೆ ನೀ ಒಲವ ಕಾಣಿಕೆ!!
ನಿನ್ನ ಮೋಹದ ಮೋಡಿ ಆಟಕೆ
ಉದಯವಾಯಿತು ನಾಚಿಕೆ!!
ಉಸಿರಿನಲ್ಲಿ ಹಸಿರ ಜೀವವು
ಹೆಸರ ಕೂಡಿ ಕರೆದ ಬಾವವು!!
ಅದರದಲ್ಲಿ ಕೊಂಚ ಮೌನವು
ಹೃದಯದಲ್ಲಿ ಪ್ರೇಮ ವಾದ್ಯವು!!
ಮಳೆಯ ರವಿಯ ಮಿಲನವಾಗಲು
ಏಳು ಬಣ್ಣದ ಜನನವಾಯಿತು!!
ಮನದಿ ನಿನ್ನ ರೂಪ ಮೂಡಲು
ಬದುಕ ಬಣ್ಣ ಹೊಸತೇ ಆಯಿತು!!
- ಪಿ.ಜಿ.ಜ್ಯೋತಿ
01 Aug 2021, 06:02 pm
Download App from Playstore: