1947 ಸ್ವಾತಂತ್ರ್ಯ
1947 ಸ್ವಾತಂತ್ರ್ಯ
ಯಾರಿಗೆ ಬಂತು ಯಾತಕೆ ಬಂತು
ಕೊಳಕು ಮನಸ್ಸಿನ
ಹೋಲಸು ಮನುವಾದಿಗಳು
ತಿರಂಗ ಇಡಿದು ದಬ್ಬಾಳಿಕೆ
ನೆಡೆಸುವ ಸ್ವಾತಂತ್ರ್ಯ
ಉಳ್ಳವರು ಇಲ್ಲದವರ
ಕಿತ್ತು ತಿನ್ನುವ ಸ್ವಾತಂತ್ರ್ಯ
ಮೇಲು ಕೀಳೆಂಬ
ಜಾತಿ ಮತಗಳ ಕಿತ್ತಾಟದ ಸ್ವಾತಂತ್ರ್ಯ
ಯಾರಿಗೆ ಬೇಕು ಯಾತಕೆ ಬೇಕು
ಸಮನತೆಯೇ ಇಲ್ಲದ
ಬರಿ ತಾರತಮ್ಯ ವೇ ತುಂಬಿದ
ಈ ಸ್ವಾತಂತ್ರ್ಯ
ದಶಕಗಳೆ ಕಳೆದರು
ಅಳಿಯಾದ ಹೆಣ್ಣಿನ ಶೋಷಣೆ
ಶಿಕ್ಷಿತರಾದರು ಅನಾಗರಿಕರಂತೆ
ಮೃಗಗಳಂತೆ ಬದುಕುವ
ಗುಲಾಮಗಿರಿಯ ಸ್ವಾತಂತ್ರ್ಯ
ಯಾರಿಗೆ ಬೇಕು ಯಾತಕೆ ಬೇಕು
ಶತಕಗಳೇ ಬಾರಿಸಿದರು
ಮನುವಾದ ಅಳಿಸದ
ಜಾತಿಗಳು ನಾಶಿಸದ
ಬಡವ ಬಲ್ಲಿದ ತಾರತಮ್ಯ
ನಿಲ್ಲದ ಈ ಸ್ವಾತಂತ್ರ್ಯ
ಯಾರಿಗೆ ಬೇಕು ಯಾತಕೆ ಬೇಕು
***ರಾಜು ಹಾಸನ***
- ರಾಜು ಹಾಸನ
16 Aug 2021, 12:48 am
Download App from Playstore: