ಹುಚ್ಚು ಮನಸ್ಸು
ಹುಚ್ಚು ಮನಸ್ಸು
ನಿನ್ನ ಹುಡುಕಾಡುತಿದೆ
ಹುಚ್ಚು ಕನಸಲಿ ಮೆಚ್ಚಿ
ನಿನ್ನ ಮುದ್ದಾಡುತ್ತಿದೆ
ಕಳೆದ ಕ್ಷಣಗಳ
ನೆನಪಲಿ ಸೆಣಿದಾಡುತ್ತಿದೆ
ನೂರೆಂಟು ಚಿಂತೆಯಲಿ
ನೊಂದು ಕೊರಗುತ್ತಿದೆ
ಕಂಗಳು ಕಂಬನಿ ಮಿಡಿದು
ಹೃದಯ ವೇದನೆಯ ಹಾಡಿ
ಮಾತುಗಳು ಮೌನವಾಗಿ
ಚಿಂತೆಗಳ ಸಾಗರದಲಿ
ಮೂಕ ಹಕ್ಕಿಯಂತೆ
ಹುಚ್ಚು ಮನಸಿನ ಕಿಚ್ಚಿನಲಿ
ಏನಂತೂ ಅರಿಯದೆ
ನೆನಪುಗಳ ಆಳದಲಿ
ಜೀವಂತ ಶವವಾಗಿದೆ
- shankar gargi
23 Aug 2021, 08:12 pm
Download App from Playstore: