ಇನ್ನೇನೈತಿ

ಒಂಟಿ ಮಾಡಿ ಹೊರಟ ನಿಂತೆಲ್ಲೋ
ಸುಡಗಾಡಕ್ಕ ಒಂಟಿ ಮಾಡಿ
ಹೊರಟ ನಿಂತೆಲ್ಲೋ

ಎಲ್ಲಾವ ಇಲ್ಲೇ ಬಿಟ್ಟು
ಹೊಂಟಿಯಲ್ಲೋ ಸುಡುಗಾಡಕ್ಕ
ಒಂಟಿಯಾಗಿ ಬಂದು
ಒಂಟಿಯಾಗಿ ಹೊಂಟಿಯಲ್ಲೋ

ಎತ್ತುವರು ನಿನ್ನ ನಾಲ್ಕು ಹೆಗಲಮ್ಯಾಲ
ಬೆನ್ನಟ್ಟಿ ಬರುವರು ನಿನ್ನ
ಸುಡುಗಾಡು ಸೇರೋತನಕ
ಸುಡುವರೋ ನಿನ್ನ ಬೂದಿಯಾಗುವ ತನಕ

ಹುಟ್ಟಿದಮ್ಯಾಲ ಸಾಯುವುದು ಒಂದು ದಿನ
ಸತ್ತಮ್ಯಾಲ ಇನ್ನೇನೈತಿ
ಸುಡುಗಾಡು ಸೇರೋದೈತಿ
ಮುಗಿದೈತಿ ನಿಂದ ಚಿಂತಿ

ಒಳ್ಳೆಯದು-ಕೆಟ್ಟದ್ದು
ಬರುವುದು ಬೆನ್ನತ್ತಿ
ಮುಗೀತು ಇನ್ನೇನೈತಿ
ಮಾಡುವರು ಮುಂದಿನ ಚಿಂತಿ

- shankar gargi

25 Aug 2021, 08:45 am
Download App from Playstore: