ಗೆಳತಿಯ ಸವಿನೆನಪು
ನನ್ನ ಬಾಳ ಪಯಣದ ಹಾದಿಯಲ್ಲಿ
ನಿನ್ನ ಪ್ರೀತಿಯ ದೋಣಿಯಲ್ಲಿ
ನೂರಾರು ಕನಸುಗಳ ಕಲ್ಪನೆಯಲ್ಲಿ
ಸಾಗಿ ನೆಡೆಯುತ್ತಿರುವೇ ನಾ ಇಲ್ಲಿ
ಅಂದ ಚೆಂದದ ನೆನಪಿನಲ್ಲಿ
ಧುಮ್ಮಿಕ್ಕಿ ಹರಿಯುವ
ಕಣ್ಣೀರ ಬಿಂದುವಿನಲ್ಲಿ
ನಿನ್ನ ಪ್ರತಿಬಿಂಬ ಹುಡುಕುತ್ತಲ್ಲಿ
ಅಲೆದಾಡುತ್ತಿರುವೆ ನಾ ಇಲ್ಲಿ
ನನ್ನ ಮನದ ಅಂಗಳದಲ್ಲಿ
ನಿನ್ನ ಪ್ರೀತಿಯ ತೇರಿನಲ್ಲಿ
ಕೂಡಿ ಬಾಳುವ ಆಸೆ ಹೊತ್ತು
ಕಾದು ಕುಳಿತ್ತಿರುವೆ ನಾ ಇಲ್ಲಿ
- ರಾಜು ಹಾಸನ
29 Aug 2021, 12:48 am
Download App from Playstore: