ಕಷ್ಟ ಅಸಾಧ್ಯವಾದದ್ದು

ಜೀವವಿಲ್ಲದ ಕಲ್ಲಗೆ
ಮಂತ್ರ ತಂತ್ರ ಪಠಿಸಿದರೆ
ಜೀವವಿಲ್ಲದ ಕಲ್ಲಿಗೆ
ಜೀವ ಬರುವುದಾದರೆ
ಕಲ್ಲು ದೇವರಾಗುವುದದಾರೆ
ಸತ್ತವರಿಗೆ ಚಟ್ಟ ಕಟ್ಟವುದು ಏತಕೆ
ಅತ್ತು ಕರೆದರು
ಮರಳಿ ಬಾರದಿರುವುದು
ಹೋದ ಜೀವ
ಮರಳಿ ಗೂಡಿಗೆ ಏತಕೆ

ಜೀವವಿಲ್ಲದ ಕಲ್ಲು
ಉಸಿರು ನಿಂತ ಹೆಣ
ಎರಡು ಒಂದೇ
ಜೀವವಿಲ್ಲದ ಕಲ್ಲಿಗೆ
ಜೀವ ತುಂಬುವುದು ಒಂದೇ
ಉಸಿರು ನಿಂತ ಹೆಣಕ್ಕೆ
ಉಸಿರು ತುಂಬುವುದು ಒಂದೇ
ಇದು ಕಷ್ಟ ಅಸಾಧ್ಯವಾದದ್ದು

- ರಾಜು ಹಾಸನ

04 Sep 2021, 12:18 am
Download App from Playstore: