ಓ ಚೆಲುವೆ
ಕಣ್ಣಂಚಿನ ಮಿಂಚಲ್ಲಿ
ಮನದಾಳದ ಮಡಿಲಲ್ಲಿ
ಮಿಂಚಾಗಿ ಬಂದೆ ಓ ಚೆಲುವೆ
ಹುಣ್ಣಿಮೆಯ ಚಂದಿರನ
ಬೆಳದಿಂಗಳ ಬೆಳಕಲ್ಲಿ
ಮಿಂದು ಬಂದೆ ಓ ಚೆಲುವೆ
ದುಂಡನ ಮೊಗದವಳೆ
ಮೀನಂತ ಕಣ್ಣವಳೆ
ಹಾಲುಗೆನ್ನೆಯ ಓ ಚೆಲುವೆ
ಮನದಾಳದ ಬೆಳಕಲ್ಲಿ
ಹೊಸ ಬೆಳಕು ಸೂಸುತ್ತಾ
ಬಾಳ ಬೆಳಕಿನ ಓ ಚೆಲುವೆ
ವನಸಿರಿಯ ಹಸಿರಲ್ಲಿ
ಹೊಸತನವ ತಂದವಳೇ
ಹಸಿರು ಸಿರಿಯ ಓ ಚೆಲುವೆ
ಮುಂಜಾವಿನ ಮಂಜಲ್ಲಿ
ಇಬ್ಬನಿಯ ಹನಿಯಲ್ಲಿ
ನೀರಾಗಿ ಬಂದೆ ಓ ಚೆಲುವೆ
ಹೂವಿನ ಹಾಸಿಗೆಯಲ್ಲಿ
ಪರಿಮಳ ಸೂಸುವ
ಮುದ್ದಾದ ಹೂವೇ ಓ ಚೆಲುವೆ
ದುಂಬಿಯ ಗಾನದಲ್ಲಿ
ಹೊಸ ರಾಗ ಹಾಡುವ
ಪ್ರೇಮದ ಗಿಣಿಯೆ ಓ ಚೆಲುವೆ
- shankar gargi
04 Sep 2021, 11:28 am
Download App from Playstore: