ಬಲ್ಲವರು ಉಂಟೆ
ಕುದಿಯುವ ನೀರಿನೊಳಗಿನ
ಕುಳ್ ಮುಟ್ಟಿ ತಿಳಿದವರುಂಟಯ್ಯಾ
ಮನುಜನ ಮನದ ಮರ್ಮವ
ತಿಳಿದವರು ಯಾರ್ ಉಂಟಯ್ಯಾ
ದೇವರ ಗುಡಿಯಲ್ಲಿ
ದೇವರು ಇರುವುದೋ ಇಲ್ಲ
ದೆವ್ವವು ಇರುವುದೋ
ಕಂಡು ಬಲ್ಲವರು
ಯಾರ್ ಇರುವರಯ್ಯ ಈ ಜಗದಲ್ಲಿ
ಸತ್ತವನು ಸಾವವಾಗುವನೆ ಹೋರೆತು
ಮಾಯವಿಯಾಗಲಾರ ಹಾಗೆಯೇ
ಸತ್ತ ಕಲ್ಲು ಕೆತ್ತಿದ್ದಾರೆ
ಮೂರ್ತಿಯಾಗುವುದೇ ಹೋರೆತು
ದೇವರಾಗಲಾರದಯ್ಯ
ಸಮಾನತೆ ಇಲ್ಲದ ಸಮಾಜಕ್ಕಿಂತ
ನೆಮ್ಮದಿ ಇಲ್ಲದ ಊರಿಗಿಂತ
ಜಾತಿ ಮತದ ಮಂತ್ರ ತಂತ್ರದ
ಕುತಂತ್ರದ ದೇವರ ಗುಡಿಗಿಂತ
ನಿಶ್ಯಬ್ಧದ ಗೂಡು ಸಮಾನತೆಯ ಸುರು
ಆತ್ಮಗಳ ತವರೂರು ಸ್ಮಶಾನವು
ದೇವಾ ಲೋಕಕ್ಕಿಂತ ಮಿಗಿಲ್ಲಲ್ಲವೇ
- ರಾಜು ಹಾಸನ
10 Sep 2021, 12:34 am
Download App from Playstore: