ಆಚರಣೆ

ಜ್ಞಾನಕ್ಕಿಲ್ಲ ಅಂತರ ತಾರತಮ್ಯ
ಜಾತಿಗೆ ಇರುವುದು ನಿರಂತರ ಅಂತರ
ಜ್ಞಾನವೆಂಬುದು ಜಾತಿಯ ಜಗುಲಿಯಲ್ಲ
ಜನರ ಮನದಲ್ಲಿನ ಬೇಳಕಯ್ಯ

ಜಾತಿ ಎಂಬುದು ಕರಿನೆರಳಾದರೆ
ಜ್ಞಾನ ಎಂಬುದು ದಿವ್ಯಜ್ಯೋತಿಯಯ್ಯ
ಸಿರಿವಂತಿಕೆ ಸಿರಿವಂತರ ಸಿರಿತನವಲ್ಲ
ಶ್ರಮಿಕರ ಶ್ರಮದ ಫಲವಯ್ಯ

ಜಾತಿ ಮತಗಳ ಆಚರಣೆ
ಮೂಢ ಜನಗಳಿಗೆ ಸಂಭ್ರಮಾಚರಣೆ
ಮುಗ್ಧ ಜನಗಳ ಹಸಿವಿನ ಆಚರಣೆ
ಮನುವಾದಿಗಳಿಗೆ ವಿಜೃಂಭಣೆಯ ಆಚರಣೆ




- ರಾಜು ಹಾಸನ

12 Sep 2021, 12:14 am
Download App from Playstore: