ಪ್ರಾಸ ತ್ರಾಸ

ಗುಣವಿಲ್ಲದ ದೇಹಕ್ಕೆ ಅಲಂಕಾರವೇತಕೆ
ಜೀವವಿಲ್ಲದ ದೇಹಕ್ಕೆ ಸಿಂಗಾರವೇತಕೆ
ಜೀವನದ ಗಂಧ ಗಾಳಿ ತಿಳಿಯಾದ
ಕಲ್ಲಿಗೆ ಪೂಜೆ ಪುನಸ್ಕಾರವೇತಕೆ

ಸಂಸಾರದ ಅರಿವಿಲ್ಲದ ಸನ್ಯಾಸಿಗೆ
ಸಂಸಾರವೇತಕೆ
ಗುರಿ ಇಲ್ಲದವನಿಗೆ ಗುರು ಏತಕೆ
ಛಲವಿಲ್ಲದವನಿಗೆ ಜ್ಞಾನವೇತಕೆ

ಮನುಜನೇ ತಿದ್ದಿ ತೀಡಿದ ಗೊಂಬೆಗೆ
ಬಿದ್ದು ಬೇಡುವನಯ್ಯ ಮನುಜ
ಇವನೇನು ಮುಗ್ಧನೋ ಮೂಢನೋ
ಒಂದು ತಿಳಿಯಾದಯ್ಯ

ಆತ್ಮವಿಲ್ಲದ ಮಣ್ಣು ಕಲ್ಲಿನ ಗೊಂಬೆ
ಪರಮಾತ್ಮನಾಗುವುದದಾರೇ
ಅದೇ ಗೊಂಬೆಗಳನ್ನು ಸೃಷ್ಟಿಸಿದ
ಮನುಜ ದೇವಾತ್ಮನಲ್ಲವೇ






- ರಾಜು ಹಾಸನ

12 Sep 2021, 11:57 pm
Download App from Playstore: