ಇರಲಿ - ಇಲ್ಲದಿರಲಿ

ಜ್ಞಾನವಿರಲಿ ಶಿರದೊಳಗೆ
ಶುದ್ಧವಿರಲ್ಲಿ ಮನದೊಳಗೆ
ಸಂಸ್ಕಾರವಿರಲಿ ಸಂಸಾರದೊಳಗೆ

ಆಚಾರಣೆ ಇದ್ದರು ಇರಲಿ
ಮನುಜನ ಮನೆಯೊಳಗೆ
ಮೂಢ ನಂಬಿಕೆ ಇಲ್ಲದಿರಲಿ
ಮನುಜನ ಮನದೊಳಗೆ
ಅನ್ಯಾಯ ಅನಾಚಾರಗಳಿಗೆ
ಜಾಗವೇ ಇಲ್ಲದಿರಲಿ
ಈ ಜಗದ ಜಗದೊಳಗೆ

ಶ್ರದ್ಧೆ ಇರಲಿ ಕಾಯಕದಲ್ಲಿ
ಕರುಣೆ ಇರಲಿ ಹೃದಯದಲ್ಲಿ
ಸಹನೆ ಇರಲಿ ಜೀವದಲ್ಲಿ

- ರಾಜು ಹಾಸನ

13 Sep 2021, 10:34 pm
Download App from Playstore: