ಮುಗ್ಧ ಜನಗಳು
ಕಿತ್ತು ತಿನ್ನುವ
ಬಡತನವಿದ್ದರೂ
ಕಣ್ಣ್ ಮುಚ್ಚಿ
ಮಣ್ಣಾಗುವ ತನಕ
ಹೊಟ್ಟೆ ಬಟ್ಟೆ ಕಟ್ಟಿ
ಗಂಜಿ ನೀರು ಕುಡಿದು
ಬದುಕು ದುಡಬವುದಾದರು
ಬಡವರ ಹೆಣ್ಣು ಮಣ್ಣು
ಹೊನ್ನು ಕಂಡರೆ
ಕುಕ್ಕಿ ಕುಕ್ಕಿ ತಿನ್ನುವ
ರಣ ಹದ್ದು ನರ ರಾಕ್ಷಸರೇ
ತುಂಬಿ ತುಳುಕುತ್ತಿರುವ
ಈ ಸಮಾಜದಲ್ಲಿ
ಬದುಕು ಕಟ್ಟುವುದು
ಹೇಂಗಯ್ಯ ಹೇಗಯ್ಯ
ದೇವರಂತೆ ದೇವರು
ಏನು ದೇವರೋ
ಯಾಂತ ದೇವರೋ
ಮುಗ್ಧ ಕಂದಮ್ಮಗಳ
ಮಾರುಣ ಹೋಮವೇ
ನೆಡೆಯುತ್ತಿದ್ದರು
ನೋಡಿ ಕಣ್ಣ್ ಮುಚ್ಚಿ ಕುಳಿತಿರುವ
ದೇವರು ಒಂದು ದೇವರ ?
ಓ ಮುಗ್ಧ ಜನಗಳೇ
ಏಳಿರಿ ಏಳಿರಿ ಏದ್ದೆಳಿರಿ
ಮೌಢ್ಯತೆಯಿಂದ ಹೊರಬಂದು
ನರ ರಾಕ್ಷಸರ ರುಂಡ ಮುಂಡವಾ
ಚಂಡಾಡಿರಿ ಚಂಡಾಡಿರಿ
- ರಾಜು ಹಾಸನ
15 Sep 2021, 01:07 am
Download App from Playstore: