ನೀನಾರೋ

ಯಾರೋ ನೀನು ಯಾರೋ
ಎಲ್ಲಿಂದ ಬಂದೆ ನೀನಾರೋ
ಸಾಯುವ ತನಕ ನೀನಗ್ಯಾರು
ಹೇಳು ಮನುಜಾ ನೀನಾರೋ.

ಮುಳ್ಳಿನ ಸಂಸಾರ ನಿನಗುಂಟು
ಕಷ್ಟ ಪಾಡುಗಳು ನಿನನಂಟು
ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು
ಹೋಗುವ ಮನುಜ ನೀನಾರೋ.

ಬತ್ತಲೆಯ ಬದುಕಲ್ಲಿ ಬೆಳೆದು
ಕರಿನೆರಳಲ್ಲಿ ಜೀವನ ಸವೆದು
ಮಣ್ಣು ಗೂಡುವ ಜೀವಕ್ಕೆ
ಬದುಕುವ ಆಸೆ ಇನ್ನೇಕೋ.

ಹುಟ್ಟುತ ಬತ್ತಲೇ,
ಸಾಯುತ್ತ ಬತ್ತಲೇ
ಕೊಳೆತು ನಾರುವ ದೇಹಕ್ಕೆ
ಬದುಕುವ ಹಂಬಲ ಇನ್ನೇಕೋ
ತಿಳಿದು ನೋಡಲೆ ಮನುಜಾ
ನೀನಾರೋ.


ಶಂಕರ ಗಾರ್ಗಿ




- shankar gargi

23 Oct 2021, 08:06 pm
Download App from Playstore: