ಅಂಟು ನಂಟು
ಹುಟ್ಟು ಸಾವಿಗೆ ಇಲ್ಲದ
ಜಾತಿ ಮತಗಳ
ಭೇದ ಭಾವದ ಅಂಟು
ಬಿಟ್ಟು ಹೋಗುವ
ಮೂರು ದಿನದ
ಬದುಕಿಗೆ ಇರುವುದಯ್ಯ
ಜಾತಿ ಮತಗಳ
ಭೇದ ಭಾವದ ನಂಟು
ಗಾಳಿ ನೀರಿಗಿಲ್ಲದ ಬೇರು
ಜಾತಿ ಮತಗಳಿಗೆ ಇರುವುದಯ್ಯ
ನೂರೆಂಟು ಬೇರು
ಏನೇ ಇರಲಿ ಇಲ್ಲದಿರಲಿ
ಮನುಷ್ಯತ್ವವಿಲ್ಲದ
ಕುಲ ಕುಲವೇ ಅಲ್ಲ
ಧರ್ಮ ಧರ್ಮವೇ ಅಲ್ಲ
- ರಾಜು ಹಾಸನ
29 Oct 2021, 12:45 am
Download App from Playstore: