ದೀಪಾವಳಿ

ಬೆಳಗಿಸು ಬೆಳಗಿಸು ದೀಪವ
ಓಡಿಸು ಓಡಿಸು ಕತ್ತಲೆಯ
ಬಾಳು ಬೆಳಗುವ ದೀಪವ
ಬೆಳಗಿಸು ಬೆಳಗಿಸು ದೀಪವ.

ಸಾಲು ಸಾಲು ಹಣತೆಯಲಿ
ಪ್ರೀತಿ-ಪ್ರೇಮದ ಬೆಳಕನು ಚೆಲ್ಲಿ
ಅಜ್ಞಾನದ ಕತ್ತಲೆಯಿಂದ
ಸುಜ್ಞಾನದ ಬೆಳಕಿನಡೆಗೆ
ಬೆಳಗಿಸು ಬೆಳಗಿಸು ದೀಪವ.

ಸ್ವಾರ್ಥ ದ್ವೇಷದ ಭಾವನೆ ತೋರೆದು
ಭೇದಭಾವದ ಹಂಗನು ಮರೆತು
ಅರವಿನ ಬೆಳಕನು ಸೂಸುತ
ಬದುಕಿನ ಅಂಧಕಾರವ ತೊಲಗಿಸಿ
ಬೆಳಗಿಸು ಬೆಳಗಿಸು ದೀಪವ.

ಜಾತಿ ಭೇದ ಅಳಿಸುವ ಹಬ್ಬ
ಕತ್ತಲೆಯಿಂದ ಬೆಳಕಿನೆಡೆಗೆ
ಬೆಳಗುವ ದೀಪಗಳ ಹಬ್ಬ
ಒಲುಮೆಯ ಹಬ್ಬ, ನಲುಮೆಯ ಹಬ್ಬ
ಬೆಳಗಿಸು ಬೆಳಗಿಸು ದೀಪವ.

ಶಂಕರ ಗಾರ್ಗಿ

- shankar gargi

09 Nov 2021, 10:06 pm
Download App from Playstore: