ಎದೆಯಾಂತರಾಳ

ಎದೆತುಂಬಿ ಉಕ್ಕುತ್ತಿದೆ ನೋಡು
ಭಾವನೆಗಳ ಅಂತರಾಳದಿಂದ,
ಭಾವ- ಬಯಕೆಗಳ ಸಂಗಮದಿಂದ ,
ಎನಿತೋ ಏನೋ ಮನದ ಮಿಡಿಯುವ
ಆಸೆಗಳ ಮೋಡಿಯಿಂದ.

ದೇಹದ ನಾಡಿ ಬಡಿತ ,
ಮಿಡಿಯುವ,ಉಕ್ಕುವ ಮನದ ಚಿಲುಮೆಯ ಅರಿಯದೆ , ಹರಿಯುತ್ತಿದೆ ಝರಿಯಾಗಿ
ಜೀವನೋತ್ಸಾಹದ ಪಥವಾಗಿ.

- ಅರುಣಕುಮಾರ ಮ ಜೇವರಗಿ

11 Nov 2021, 01:20 pm
Download App from Playstore: