ಸಿಹಿಮಾತು

ಉದರದಿಂದ ಹೊರಬಂದ
ಹಾಲುಗಲ್ಲದ ಹಸುಳೆ
ಮಾತೆಯೋಡನಾಡುವುದೇ
ಅಶಾಬ್ಧಿಕ ಸಿಹಿಮಾತು.

ಅಂಬೆಗಾಲಿಕ್ಕುತ್ತಾ,ತೋದಲ್
ನುಡಿಗಳ ನುಡಿಯುತ್ತಾ, ಏಳುತ್ತ -ಬೀಳುತ್ತಾ,
ಎಲ್ಲರನ್ನೂ ರಂಜಿಸುವ ಮಗುವಿನ
ಅರ್ಥಹೀನ ಶಬ್ಧಗಳ ಸಿಹಿಮಾತು.

ಸಖರೊಡನೊಡಗುಡಿ, ಅಕ್ಷರ ಧಾಮದಲ್ಲಿ
ಅಕ್ಕರೆಯಿಂದ ಗುರುಕಲಿಸಿದ
ಮೂಲಪದಗಳ ಪುನರುಚ್ಚರಿಸುವುದೇ
ಶಿಷ್ಯನ ಸಿಹಿಮಾತು.

ಯೌವನದ ಕುಡಿಯಲ್ಲಿ
ಉಲ್ಲಾಸದ ಹೊಳೆಯಲ್ಲಿ ಈಜುತ್ತಾ,ತೇಲುತ್ತಾ
ಕನಸುಗಳೊಡನೆ ಮನಸು ಆಡಿದ
ರಸಿಕತೆಯ ಸಿಹಿಮಾತು.

ವೈವಾಹಿಕ ಜೀವನದಲ್ಲಿ
ಅರ್ಧಾಂಗಿಯ ಜೊತೆಗೂಡಿ ಆಡಿದ
ಸಂಸಾರಿಕ ಸಾಮರಸ್ಯದ
ಪ್ರಣಯದ ಸಿಹಿಮಾತು.

ಇಳಿವಯಸ್ಸಿನ ಜಾರುಜೀವನದ
ಕಾಲನ ಕರೆಯ ನಿರೀಕ್ಷೆಯಲ್ಲಿ
ಬೋಚ್ಚುಬಾಯಿಯಲ್ಲಿ ಕಂದಮ್ಮಗಳ
ಆಡಿಸುವ ಸಿಹಿಮಾತು

- ಅರುಣಕುಮಾರ ಮ ಜೇವರಗಿ

16 Nov 2021, 01:17 pm
Download App from Playstore: