ಮೌನ
ಮೌನ ಏಕೆ ನಿನಗೆ
ಈ ಸುಂದರ ಮೊಗಕೆ
ಈ ಮೌನ ನಿನಗೆ ಸರಿಯೇ
ನೀ ಹೇಳಬಾರದೆ.
ಮಾತು ಮೌನವಾಗಿ
ಪ್ರೀತಿ ಕಲ್ಲಾಯಿತೆ
ಮನಸು ಕರಗದ ಮೌನ
ನೀ ಹೇಳಬಾರದೆ.
ಸಾಕು ಇನ್ನು ಈ ಮೌನ
ತಾಳಲಾರದೆ ಸಾಕಾಗಿದೆ
ಎಂತೂ ಆಡದ ಮಾತು
ನೀ ಹೇಳು ಬಾರದೆ.
ಮೌನರಾಗದ ಪ್ರೀತಿ
ಹಾಡು ಬಾರದೆ ಗೆಳತಿ
ಸಾಕು ಇನ್ನು ಈ ಮೌನ
ನೀ ನುಡಿಯ ಬಾರದೆ.
ಶಂಕರ ಗಾರ್ಗಿ
- shankar gargi
18 Nov 2021, 09:02 pm
Download App from Playstore: