ಇನ್ನೇಕೆ ಬದುಕು

ಬರತಾವ ಕಣ್ಣಾಗ ನೀರ
ನಿನ್ನ ನೆನೆಸಿ, ನಿನ್ನ ನೆನಸಿ
ಒಡೆದೈತಿ ಹೃದಯ ನಂದ
ನಿನ್ನ ನೆನೆಸಿ, ನಿನ್ನ ನೆನಸಿ.

ಮರೆಯದ ಜೀವ ನಿನ್ನ
ಹಿಂಡೈತಿ ನನ್ನ ಮನಸ್ಸನ್ನ
ಹ್ಯಾಂಗಿರಲಿ ಬಿಟ್ಟು ನಾ ನಿನ್ನ
ಬಿಡದ ಚಿಂತೆ ನನಗಿನ್ನ.

ಕೂಡಿ ಆಡಿದ ನೆನಪಲ್ಲಿ
ಮರೆತಿದ್ದೆ ನನ್ನ ನಾನು
ನೀ ಇರದ ಜೀವ ಇನ್ನೇನು
ಸಾಕು ಬದುಕು ಮುಂದೆನು.

ಬದುಕಿನ ದಾರಿಯಲ್ಲಿ ನೂರೆಂಟು ಕನಸು
ಹಸನಾದ ಬದುಕಿಗೆ ನಿನ್ನ ಈ ನಂಟು
ಕಣ್ಣು ಮುಚ್ಚಲು ಬರುತಾವ ನೆನಪು
ಕರುಣೆ ಇಲ್ಲದ ಅವನಿಗೆ ಇನ್ನೇಕೆ ಬದುಕು.

ಶಂಕರ ಗಾರ್ಗಿ

- shankar gargi

19 Nov 2021, 10:34 pm
Download App from Playstore: