ಮನಸ್ಸ ಅರಿತ ಸ್ನೇಹಿತೆ
ನೀ ದೂರೆತೆ ನನ್ನ ಸ್ನೇಹಿತೆ
ಇನ್ನೂ ನನಗೆ ನಿನ್ನ ಚಿಂತೆ
ನಿನ್ನ ಮಾತಿಲ್ಲದೆ ದಿನ ಮುಗಿಯಲ್ಲ
ನಿನ್ನ ಮನಸ ನಾ ಅರಿಯಬಲ್ಲ...
ನನ್ನ ಮನಸ ನೀ ಅರಿಯಬಲ್ಲಳು
ನನ್ನ ನೋವ ನೀ ಮರೆಸಬಲ್ಲಳು
ನಿನಿದ್ದರೆ ನನ್ನೊಡನೆ ಎಂದೆಂದೂ
ಖುಷಿಯ ಜೀವನ ನನ್ನದಿಂದೂ....
ನನ್ನ ತಿದ್ದುವ ಹಕ್ಕಿದೆ ನಿನಗೆ
ನೋವಲ್ಲಿ ಜೋತೆಯಾಗಿರು ಹೀಗೆ
ನನ್ನ ದಿನದ ಪಯಣದಲ್ಲಿ ನೀನಿರು
ನನ್ನ ಬಿಟ್ಟು ಎಂದು ಹೊಗದಿರು....
ದಿನ ನಿನ್ನ ಕರೆ ಇರದೆ ಇರಲಾರೆ
ನಿನ್ನ ಸ್ನೇಹ ಎಂದಿಗೂ ಮರೆಯಲಾರೆ
ಮನದಾಳದಿಂದ ನಾ ಹೇಳುವೆ ಇಂದು
ನನ್ನ ಜೀವನದ ಪುಟದಲ್ಲಿ ನೀ ಎಂದೆಂದೂ
ನಮ್ಮ ಸ್ನೇಹ ಪಯಣವಿಂದು ಆರಂಭ
ನಗು ತುಂಬಿರಲಿ ನಿನ್ನ ಮನದ ತುಂಬ
ನನ್ನ ಸ್ನೇಹ ಎಂದು ಮರೆಯದಿರು
ಕೊನೆವರೆಗೂ ನನ್ನ ಜೋತೆಯಾಗಿರು.....
- vijay kumar
27 Nov 2021, 07:30 pm
Download App from Playstore: