ಕಾಡೈತಿ ಅವಳ ನೆನಪು.
ಮುತ್ತಿನಂಥಾಕೀ ಇವಳು
ಬಲು ಚಂದ ಅವಳ ನಗುವು
ಇನ್ನು ಚಂದ ಅವಳ ಮೊಗವು
ಕಾಡತೈತಿ ಅವಳ ನೆನಪು.
ಕವಳೆಯಂತ ಅವಳ ಕಣ್ಣು
ಸಂಪಿಗೆಯಂತ ಅವಳ ಮೂಗು
ಚಂದಿರನಂತ ಅವಳ ಬೆಳಕು
ಹಾಲಿನಂತ ಅವಳ ಮನಸ್ಸು
ಕಾಡೈತಿ ಅವಳ ನೆನಪು.
ತಿದ್ದಿ ತೀಡಿ ಮಾಡಿದ ದೇಹ
ನೋಡಲೆಷ್ಟು ಚನ್ನ ಅದರ
ಸಿವಿ ನುಡಿಯ ಮುತ್ತಿನ ಮಾತು
ನೇರ ನೋಟದ ಚೆಲುವೆ ಅವಳು
ಕಾಡೈತಿ ಅವಳ ನೆನಪು.
ಕಂಗಳ ಕಣ್ಮಣಿ ಅವಳು
ಬದುಕಿನ ಶೃಂಗಾರ ಅವಳು
ಬಾಳಿನ ಬೆಳಕು ಅವಳು
ಹೃದಯದ ದೇವತೆ ಅವಳು
ಕಾಡೈತಿ ಅವಳ ನೆನಪು.
ಮಲೆನಾಡಿನ ಕೋಗಿಲೆಯ ಕಂಠ
ಮೈ ಮನ ತಣಿಸುವ ಸೂಬಗು
ಹುಚ್ಚು ಹಿಡಿಸುವ ಒಲವು
ಮೆಚ್ಚಿ ಮುತ್ತಿಟ್ಟ ಸಿರಿಯು
ಕಾಡೈತಿ ಅವಳ ನೆನಪು.
ಸಾಗಿಹವು ದಿನಗಳು ದೂರ
ಅವಳ ನೆನಪು ಬರಿ ಅಮರ
ಕಲ್ಪನೆಯ ಕವಿತೆ ಅವಳು
ಮನೆ ಮೆಚ್ಚಿದ ಮಮತೆ ಅವಳು
ಕಾಡೈತಿ ಅವಳ ನೆನಪು.
ಶಂಕರ ಗಾರ್ಗಿ
- shankar gargi
30 Nov 2021, 09:23 pm
Download App from Playstore: