"ಮುದ್ದು ಪೆದ್ದಿನ ಹುಡುಗಿಯರು"
ಗೊತ್ತಿಲ್ಲ ಗುರಿಯಿಲ್ಲ
ಕಾಣದ ಕಡಲು
ಎಲ್ಲೋ ಒಂಟಿಯಾದೆ ಎಂಬ ಭಾವದಿಂದ
ಬಂದಿಳಿದೆ ಹಾಸ್ಟೆಲ್ ಗೆ
ಮೌನವಾಗಿದ್ದ ಮನಕೆ ಸನಿಹವಾದರು,
ಬಾಯಾರಿದ ಬಾಯಿಗೆ
ಮರುಭೂಮಿಯಲ್ಲಿ ನೀರ ಕಡಲೇ ಸಿಕ್ಕಂತೆ
ಪರ ಊರು ಪರ ಬಂಧವಾದರೂ
ಒಂದೇ ತಾಯಿಯ ಮಕ್ಕಳಂತೆ ಬೆರೆತರು.
ಸ್ವಲ್ಪ ಗಲಾಟೆ, ಸ್ವಲ್ಪ ತುಂಟತನದ
ಮಾತಿನ ಮಲ್ಲಿಯರು
ಸದಾ ನಗುವ ಚೆಲ್ಲುವ ರತ್ನ ಮಣಿಗಳು.
ಎಲ್ಲಕು ಹೊಂದಿಕೊಳ್ಳುವ ಜೊತೆಗಾರ್ತಿಯರು
ಪ್ರೀತಿ- ಮಮತೆಯ ತೋರುವ
ವಿಶಾಲ ಹೃದಯದವರು
ನನ್ನೀ ಹಾಸ್ಟೆಲ್ ಸ್ನೇಹಿತೆಯರು
ಎಲ್ಲಕು ಹೊಂದಿಕೊಳ್ಳುವ ಜೊತೆಗಾರ್ತಿಯರು
- Asha
01 Dec 2021, 08:38 pm
Download App from Playstore: