ಅಪ್ಪ

ಜೀವನದ ಮೊದಲ ಗುರು ನೀವು
ಮನದ ಧೈರ್ಯ ನಿಮ್ಮೊಲವು
ಸ್ವಾಭಿಮಾನ ನಿಮ್ಮ ಆಸ್ತಿ
ಗಾಂಭೀರ್ಯ ತುಂಬಿದ ಪ್ರಕೃತಿ...

ಕೋಪದ ಹಿಂದಿದೆ ಪ್ರೀತಿ
ಅಕ್ಕರೆಯ ಚೈತನ್ಯ ಮೂರ್ತಿ
ಜೀವ ನೀಡಿದ ದೈವ ಸ್ವರೂಪ
ನಿಮ್ಮ ಕರ್ಮ ಮಾರ್ಗ ನಮಗೆ ದಾರಿದೀಪ...

ಭಯಪಡಿಸುವುದು ನಿಮ್ಮ ಕಣ್ಸನ್ನೆ
ಅಲ್ಲಿ ಬಯಸುವುದು ನಮ್ಮ ಕಾಳಜಿಯನ್ನೆ
ಕೆಲಸವೇ ದೇವರೆಂದು ತಿಳಿಸಿದವರು
ಎಲ್ಲರ ಹಿತಕ್ಕಾಗಿ ದುಡಿದವರು...

ಯಾರ ಹಂಗು ಬೇಡವೆಂದಿರಿ
ದ್ವೇಷ ಮರೆಯುವುದನ್ನು ಕಲಿಸಿದಿರಿ
ಆಡುವ ವಯಸ್ಸಲ್ಲೇ ಜವಾಬ್ದಾರಿ ಹೊತ್ತಿರಿ
ತಂದೆಯ ಸ್ಥಾನದ ಪರಿಪೂರ್ಣತೆ ನೀವಾದಿರಿ...



love you pappa...









- Tanuja.K

07 Dec 2021, 09:33 pm
Download App from Playstore: