ಒಲ್ಲೇ ಎನ್ನದಿರು.

ಒಲ್ಲೇ ಎನ್ನದಿರು ಗೆಳತಿ
ಈ ಗೆಳೆಯನ
ನೆನಪು ಬಂದರೆ ಸಾಕು
ಕುಣಿಯುವುದು ಈ ಮೈಮನ.

ಕಣ್ಣಲ್ಲಿ ನಿನ್ನ ಆ ಚಿತ್ರಣ
ಹೆಂಗ ಮರೆಯಲಿ ನಿನ್ನ
ಆ ನಗು ಚುಂಬನ
ಮಾತು ಮುತ್ತೀನ ಮಲ್ಲೇ
ನೀ ಮೌನವಾಗದಿರು ನಲ್ಲೇ.

ಈ ಬದುಕಿನ ಸಾಗರ ನೀನು
ಸಾಗುವ ದಾರಿಯ ಸಂಗಮ ನೀನು
ಈ ಹೃದಯದ ಬಡಿತ ನೀನು
ನನ್ನ ಪ್ರೀತಿಯ ಕಡಲು ನೀನು.

ಸುಖ ದುಃಖದ ಸಂಗಾತಿ ನೀನು
ಬಾಳಪಯಣದ ಜೊತೆಗಾತಿ ನೀನು
ನೀ ಇರಲು ಸಾಕು ಎನಗೆ
ಈ ಬಾಳು ಸ್ವರ್ಗದಂತೆ

ಒಲ್ಲೇ ಎನ್ನದಿರು ಗೆಳತಿ
ಈ ಗೆಳೆಯನ.

ಶಂಕರ ಗಾರ್ಗಿ


- shankar gargi

12 Dec 2021, 05:30 pm
Download App from Playstore: