ಜನ್ಮ
ಏನಿದು ಮಾನವ ಜನ್ಮ
ಏನೂ ಅರಿಯದ ಮರ್ಮ
ಮುಂದೇನು ಇದರ ಕರ್ಮ
ತಿಳಿಯದು ಆ ದೇವನ ಮರ್ಮ.
ಏನುಂಟು ಏನಿಲ್ಲ
ಈ ಜನುಮದ ನಂಟು
ಸಾವು-ಬದುಕಿನ ಸವೆಯದ ನಂಟು
ಗೊತ್ತಿಲ್ಲ ಗುರಿಯಿಲ್ಲದ ಈ ಬದುಕು.
ಮೂರು ದಿನದ ಸಂತೆಯಲಿ
ನೂರು ಚಿಂತೆಯ ಮಾಡಿ
ಬದುಕಿನ ದಾರಿಯ ಕಾಣದ ಜನ್ಮ
ನಿನಗ್ಯಾಕೋ ಅದರ ಹಂಗ್ಯಾಕೋ.
ಸುಖ ದುಃಖದ ಸಾಗರವ ಮಾಡಿ
ಹುಟ್ಟು-ಸಾವು ಅದರಲ್ಲಿ ಮಡಗಿ
ನೋವು-ನಲಿವಿನ ಆಟವ ಆಡಿ
ಸಾಗುವುದು ನಾಲ್ಕುಹೆಗಲ ಜೋಡಿ.
ಶಂಕರ ಗಾರ್ಗಿ
- shankar gargi
14 Dec 2021, 08:50 pm
Download App from Playstore: