ರಕ್ತ ಸಂಬಂಧಿಯಾದರೂ ನೀ
ನಾ ಯೋಚಿಸಲಿಲ್ಲ ನೀ ಯಾರೆಂದು
ಅದರ ಅವಶ್ಯಕತೆ ಇರಲಿಲ್ಲ ನನಗಂದು..
ನಾ ನನ್ನವನು ಯಾರೋ ಎಲ್ಲೋ ಇಹನು
ಎಂಬಂತೆ ನನ್ನ ಪಾಡಿಗೆ ನಾ ಇರಲು,,
'ನಿನಗೆ ನಾನು ' ಎಂದು ಸರಿದೂಗಿ ಜೀವನದ ಮಹತ್ತರ ನಿರ್ಧಾರ ಹೆತ್ತವರು ಹೇಳಲು !!!!!
ಅಂದು ನೂರೆಂಟು ಪ್ರಶ್ನೆ, ಒಂದಿಷ್ಟು ಗೊಂದಲ,
ಹೇಗೋ!ಏನೋ!ಎಂತೋ! ನಿನ್ನ ಮನದಾಳ ಎಂಥದ್ದು? ನನ್ನ ಗುಣಕ್ಕೆ ಜೊತೆಯಾಗುವನೇ ??
ನನ್ನ ಭಾವನೆಗಳಿಗೆ ಸ್ಪಂದಿಸುವನೇ ??
ನನ್ನಾಸೆಗಳಿಗೆ ನೀರೆರೆದು ಪೋಷಿಸುವನೆ ??
ಹೀಗೆ ಪ್ರಶ್ನೆಗಳ ಗುಂಪು ಸಾಲು ಸಾಲು ನಿಂತಿತ್ತು.
ಬೇಡವೆಂದೇ ನಿನ್ನ ಆಗಮನ ನನ್ನ ಜೀವನದಲೀ
ಆದರೆ ಕಾಲ ಕಟ್ಟಿತ್ತು ನಿನ್ನ ನನ್ನ ಸೆರಗಲೀ
ಅಂತೂ ಬೇಕೋ ಬೇಡವೋ ಮಾತಿನಿಂದ ಶುರುವಾದ ಈ ನಮ್ಮ ಸ್ನೇಹ!!
ಇಂದು "ನಾವಿಬ್ಬರೂ" ಎಂಬ ಪವಿತ್ರ ಬಂಧಕ್ಕೆ ತಲೆದೂಗಿದೆ
ಅಂದು ನೀನ್ಯಾರು ಎನ್ನುತ್ತಿದ್ದ ಮನಸು
ಇಂದು ನಾ ನಿನ್ನ ಜೊತೆಯಾಗಿ ಎನ್ನುತಿದೆ
ಕ್ಷಮಿಸು ತಪ್ಪಾಗಿದ್ದರೆ ಪ್ರೀತಿಸು ವ್ಯಕ್ತಿತ್ವ ಇಷ್ಟವಾದರೆ!














- Asha

19 Dec 2021, 11:45 pm
Download App from Playstore: