ಚಿಂತಿಸಿ ಯೋಚಿಸಿ

ಪೂಜೆ ಪುನಸ್ಕಾರ ಇಲ್ಲವೆಂದು
ಅಳುವುದಿಲ್ಲ ಕಲ್ಲು ಬಂಡೆಯ ದೇವರು
ಒಂದು ಹೊತ್ತು ಕೂಳು ಇಲ್ಲದಿದ್ದರೆ
ಅಳುವುದು ಒಡಲ ಚೀಲ

ಹಣ್ಣು ಕಾಯಿ ನೈವೇದ್ಯ ಇಲ್ಲದಿದ್ದರೂ
ಸಾಯುವುದಿಲ್ಲ ದೇವರು
ಮೂರು ಹೊತ್ತು
ದೇವರ ಉಪವಾಸವೆಂದು
ಉಪವಾಸಬಿದ್ದರೆ
ಬಾಳಲಿ ಸಾಯುವುದು
ಬಡಪಾಯಿ ಮನುಜನ ಜೀವ

ಹುಂಡಿ ಇಲ್ಲದಿದ್ದರೂ
ನೆಡೆಯುವುದು ದೇವರ ಜಾತ್ರೆ
ದುಡ್ಡಿಲ್ಲದಿದ್ದರೆ ನೆಡೆಯುವುದಿಲ್ಲ
ಮಾನವನ ಶವ ಯಾತ್ರೆ


- ರಾಜು ಹಾಸನ

31 Dec 2021, 11:34 pm
Download App from Playstore: