ದಿವ್ಯ ಚೇತನ.
ಭಾರತಾಂಬೆಯ ಸುತನಾಗಿ ಜನಿಸಿದ ನೀವು,
ರಕ್ತ ಸಿಕ್ತದ ಮಣ್ಣ ಪೂಜಿಸಿ ಕ್ರಾಂತಿಯ ಕಿಡಿಯಾಗಿ
ಯುವಕರ ಹೃದಯದೊಳಗೆ ಬೆಳಗುತ್ತಿರುವ ಭಾಗ್ಯವಂತರೆ ನೀವು ನಮಗೆ.
ಅಂದರ ಭವಿಷ್ಯದ ಉದ್ದೀಪನಕ್ಕೆ ಹಗಲಿರುಳು
ಶ್ರಮಿಸಿದ ಲೂಯಿಸ್ ಬ್ರೈಲರಂತೆ ದಿವ್ಯ ಚೇತನರಾಗಬೇಕು ನೀವು ನಮ್ಮ ಪಾಲಿಗೆ.
ನೊಂದವರ ಕಷ್ಟಗಳ ಕಂಡು
ನಿಸ್ವಾರ್ಥ ಸೇವೆಗೆ ಸಿದ್ಧರಿರುವಿರಿ ಸದಾ ನೀವು
ತಥಾಗತರ ಶಿಷ್ಯರಂತೆ.
ಸಮಾಜದ ದುಸ್ಥಿತಿಗೆ ನಿವೇದಿಸೋ,
ಮನಸಿರುವ ನಿಮ್ಮ ವ್ಯಕ್ತಿತ್ವ,
ಸತ್ ಕಾರ್ಯವೆಸಗುವ ನರೇಂದ್ರರ ಕುಡಿಯಾದ ನಿಮಗೆ,
ಸಾಕ್ಷಿಯಾಗಲಿದೆ ಶರಧಿಯ ಪರದೆಗಳು ಮುತ್ತಿಟ್ಟು ನಿಮ್ಮ
ಪಾದ ತೊಳೆಯುವ ಅನುಕ್ಷಣದ ಮಹೋತ್ಸವಕ್ಕೆ.
ನನ್ನೊಳಗೆ ಮೂಡುವ ವೀರರ ಚಿತ್ರವ,
ನಿಮ್ಮೊಳಗೆ ಕಂಡಿರುವೆ ಅವರ ಸಿಂಹ ಸ್ವಪ್ನ ದಂತಹ ಪ್ರತಾಪವ.
ಸಾವಿನ ಖಚಿತತೆಯ ಅರಿತ ನೀವು,
ಇತಿಹಾಸದ ಪುಟದೊಳಗೆ ಸ್ಪಟಿಕದಂತೆ ಹೊಳೆಯಬೇಕೆಂಬ ಹೆಬ್ಬಯಕೆ ನನಗೆ.
ನಿಮ್ಮ ಅಮರತ್ವ ಕಾಯಕದ ಪತದೊಳಗೆ,
ಅವಕಾಶವ್ವಿತ್ತರೆ ನೀವು,
ನಶ್ವರದ ಆಶಯಗಳ ತೊರೆದು ನನ್ನ ಅಳಿಲು ಸೇವೆಯನರ್ಪಿಸುವೆ ನಿಮ್ಮ ಕೃತಿಗೆ.
- nagamani Kanaka
15 Jan 2022, 03:24 pm
Download App from Playstore: