ಮರಳಿ ಬಾ ಗೆಳತಿ

ಮತ್ತೆ ಮರಳಿ ಬಾ ಗೆಳತಿ...
ಇಂದು ಎನದಿರಲಿ ಕ್ಷಮೆ ಕೇಳುವ ಸರತಿ.....

ಆಳವಾಗಿ ಕಾಡುತಿದೆ ಇಂದೇಕೋ ನಿನ್ನ ನೆನಪು..
ಜೊತೆಯಲ್ಲಿಯೇ ಆ ನಿನ್ನ ಕೆನ್ನೆಯ ಹೊಳಪು..

ಒಮ್ಮೆ ನಗುವೆಯಾ ನೀ ಎನ್ನ ಗೆಳತಿ..
ತೋರಲಿ ಆ ನಿನ್ನ ಗೂಳಿಯ ಕೆನ್ನೆ ರೀತಿ ನೀತಿ..

ಇಂದು ಚಂದ್ರನಿಲ್ಲ ಆಗಸದಲ್ಲಿ ಖಾಲಿ ಖಾಲಿ
ಆಗಸಕೆ ಚಂದ್ರನಂತೆ ನನ್ನೊಂದಿಗೆ ನೀ ಇಲ್ಲದಂತೆ.
.
ಇನ್ನೂ ಮುನಿಸೇಕೆ ಮುತ್ತಿನೊಡತಿ..
ಬೇಗ ಬಾ.. ಇನ್ನೊಮ್ಮೆ ಕೂಡಿ ನುಡಿಸುವ ಆ ಮಧುರ ತಂತಿ ...

ಮತ್ತೆ ಮರಳಿ ಬಾ ಗೆಳತಿ..
ಇಂದು ನನದಿರಲಿ ಕ್ಷಮೆ ಕೇಳುವ ಸರತಿ.....
"ಕಿಚ್ಚ ಶಶಿ"

- Shashi Kumar K

07 Feb 2022, 10:27 pm
Download App from Playstore: