ಹಾಗೆ ಸುಮ್ಮನೆ...!

ಕನಸಿನ ಜೊತೆಗೆ ಭಾವನೆಗಳ ಹೂರಣ
ನಿಲ್ಲದೆ ಸಾಗಲಿ ನಿನ್ನೀ ಈ ಪಯಣ
ಗೆದ್ದರು ಬೀಗದೆ ಸುಮ್ಮನಿರು
ನಿನ್ನ ಮೌನವೇ ಕೊಡುವುದು ಉತ್ತರ

ಯಾವುದೇ ಅಪೇಕ್ಷೆ ಬಯಸಬೇಡ
ಬಯಸಿ ಬಂದವರ ಕೈ ಬಿಡಬೇಡ
ಕಾಲದ ಜೊತೆಗೆ ನೀ ಸಾಗು
ಎಲ್ಲರೊಳಗೂ ನೀ ಒಂದಾಗು

ಸ್ನೇಹಕ್ಕೆ ನೀ ಬೆಲೆಕೊಡು
ಸಂಬಂಧಕ್ಕೆ ಆಸರೆಯಾಗು
ಒಲವಿಗೆ ನೀ ದಾರಿ ಕೊಡು
ಪ್ರೀತಿಗೆ ನೀ ಸಮ್ಮತಿಯಾಗು

- Maruthi

09 Feb 2022, 09:44 pm
Download App from Playstore: