ಯಾರಿದ್ದರೇನು ಫಲ ..??
ಚಿನ್ನದ ಆನೆಯ ಮೇಲೆ ಮೆರೆಯುವಾಗ
ತಂದೆಯ ಹೆಗಲಿನ ಸಾತು ಇಲ್ಲದಿರುವಾಗ!
ಸಂಪತ್ತಿನ ಹಾಸಿಗೆಯ ಮೇಲೆ ಮಲಗುವಾಗ
ತಾಯಿಯ ಮಡಿಲಿನಲ್ಲಿ ಮಲಗುವ ಪುಣ್ಯ ಇಲ್ಲದಿರುವಾಗ!
ಆಸ್ತಿಯ ಬೇರೊಂದು ನೀ ನೆಡುರುವಾಗ
ಸಹೋದರರ ಜೊತೆ ಕೂಂಬೆ ಹಂಚಿಕೊಳ್ಳದಿರುವಾಗ .!
ಯಾರಿದ್ದರೇನು ಫಲ...???
ಅಕ್ಷರ ಕಲಿತು ನಾ ನಡೆಯುವಾಗ
ಗುರಿಮುಟ್ಟಲು ಗುರುವಿಲ್ಲದೆ ಇರುವಾಗ!
ಅಂಗದ ಮೇಲೆ ಲಿಂಗವ ಕಟ್ಟಿ
ಅಂಗದ ಒಳಗೊಂದು ಮಂಗನ ಸಾಮ್ರಾಜ್ಯ ಕಟ್ಟಿ ಇರುವಾಗ!
ಘನ ನೀತಿ ಪುಸ್ತಕಗಳನ್ನು ನೀ ನಂಬಿ
ನಂಬಿ ನಡೆದವರ ಹಿಂಬ ಕಾಯುವ!
ದೇವರನ ಮಾರಿ ಬದುಕುವಾಗ
ನಿನ್ನ ನಿನ್ನ ಸಲಹುವ ಆರಿದೆ ಚಲ!
ಯಾರಿದ್ದರೇನು ಫಲ...???
,,ಅನಾಮಿಕ....?
- ದೇವರಾಜ ಪೂಜಾರಿ
13 Mar 2022, 09:16 pm
Download App from Playstore: