ಅಂಕವಿಲ್ಲದ ಪ್ರಶ್ನೆ

ಮಂದಿಯೊಳಗ ಅವಮಾನ ಆಗದಿದ್ದರೆ..
ಮಾನ-ಸನ್ಮಾನದ ಕಲ್ಪನೆ ಎಲ್ಲಿ??

ಅಪ-ಪ್ರಚಾರದ ಬಾಯಿಗೆ ತುತ್ತಾಗದಿದ್ದರೆ..
ಸುವಿಚಾರದ ಪ್ರಚಾರಕ್ಕೆನು ಮರ್ಯಾದೆ?

ಒಬ್ಬರ-ಇನ್ನೊಬ್ಬರಿಗೆ ಎತ್ತಿ ಕಟ್ಟದೆ ಇದ್ದರೆ..
ಚಪ್ಪರಸಿ ತಿಂದ ಅನ್ನ ಕರಗೋದ್ಯಾಂಗ??

ಒಣ-ಹಿರಿತನ ಮಾಡೋರು ಇರದೇ ಇದ್ದರೆ
ಊರು-ಉಸಾಬರಿ ಯವರ ಬಾಣಿತನ ಹೆಂಗೆ??

ಸಿಟ್ಟು-ಅಸುಹೆಗಳು ಬಿದ್ದು ಬಿಕ್ಕುತ್ತಿದ್ದರೆ..
ಮಲಗಿರುವ-ಗೋರಕಿಗೆ ಗಂಟೆ ಕಟ್ಟೋದ್ಯಾಂಗ??

ಅಂಕವಿರದ ಪ್ರಶ್ನೆಗಳಿಗೆ ಉತ್ತರ?????
ಅತಿಯಾದರೆ "ಮಹಾಭಾರತ" !!!
ಮಿತವಾದರೆ "ರಾಮಾಯಣ"!!!


ಸುಗ್ಗಿ...





- ಆರ್ ಎಸ್ ಸುಗ್ಗಿ.

17 Mar 2022, 03:34 am
Download App from Playstore: