ನಿನ್ನ ಮೌನ ನನ್ನ ಪ್ರೀತಿ
ನಿನ್ನ ನೆನಪಿನ ಮೌನ
ನನ್ನ ಕನಸಿನ ಪ್ರೀತಿ
ಹೃದಯದೊಳಗೆ ಸ್ವಾಗತಿಸು
ನನ್ನನ್ನು ನೋವಿನಿಂದ ಬಿಡಿಸು
ಒಲವಿತ್ತು ಹಂಬಲಿಸು
ಕನಸಿನಕುಣಿಕೆಗೆ ಬದುಕನೊಪ್ಪಿಸು
ಕರಗಿದ ರಾತ್ರಿಗಳು ನಿದ್ದೆಗಳು ಹೆದರಿವೆ
ಹೂತಿಟ್ಟ ಪ್ರೀತಿಯ ಬಯಕೆಗಳು ಬೆಂಡಾಗಿವೆ
ಅಳಿದು ಉಳಿಸಿದ ಬದುಕು ಮಸುಕಾಗಿದೆ
ಮೌನದ ಪ್ರತಿ ಪ್ರೀತಿಗೂ ಒಂದು ಕಲ್ಪನೆ
ಪ್ರೀತಿಯ ಮೌನಕ್ಕೆ ಪಿಸು ಮಾತಿದೆ
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
16 Apr 2022, 09:43 am
Download App from Playstore: