ರೈತನ ಬೆವರಿನ ತಲ್ಲಣ

ಹಸಿವು ಗೊತ್ತು ರೈತನಿಗೆ
ಕಸುವು ಗೊತ್ತು ಹೂಳುವ
ಸರದಾರ ಅನ್ನನೀಡುವ
ಮಮಕಾರ ನಿನ್ನದೆ
ಬದುಕುವ ಅವಕಾಶ
ನಡುವಣ ಪಡುವಣ
ಗಾಳಿ ಮಳೆ ಬಿಸಿಲು
ಅಬ್ಬರದೊಳಗೆ ನೊಂದು
ಬೆಂದರೂ ನಿನ್ನ ಕೊರಗುವ
ಕಷ್ಟದ ತಲ್ಲಣಗಳು ಯಾರಿಗೂ
ಕಾಣದು ಸಂಕಟದ
ಒಡಲು ಬಿರಿದರೂ
ಬೆವರಿನ ವಾಸನೆಯೊಳಗೆ
ಬವಣೆ ಪಡುವಾತನೇ
ನೀ ನಮ್ಯತೆ ನೀಡುವ ಅನ್ನದ
ಪ್ರತಿ ಅಗಳಿಗೂ ಅಕ್ಕರೆಯ ಬೆವರಿನ ಉಸಿರಿದೆ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:00 am
Download App from Playstore: